ಸಂಜಿತ್ ಹೆಗ್ಡೆ (ಜನನ ೩ ಅಕ್ಟೋಬರ್ ೧೯೯೮), ಬೆಂಗಳೂರು ಮೂಲದ, ಭಾರತೀಯ ಹಿನ್ನೆಲೆ ಗಾಯಕ. ಸಂಜಿತ್ ಹೆಗ್ಡೆ ಹಲವಾರು ಭಾರತೀಯ ಭಾಷೆಗಳಲ್ಲಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ ಮತ್ತು ಅನೇಕ ಜನಪ್ರಿಯ ಹಾಡುಗಳನ್ನು ನೀಡಿದ್ದಾರೆ. ಅವರು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಇವರು ಹಾಡಿರುವ ಚರಣ್ ರಾಜ್ ಸಂಯೋಜನೆಯ ದಳಪತಿ ಚಿತ್ರದ "ಗುನು ಗುನುಗುವ" ಗೀತೆ ಒಂದು ವರ್ಷದ ಕಾಲ ಜನಪ್ರಿಯತೆಯಲ್ಲಿ ಅಗ್ರಸ್ಥಾನ ಹೊಂದಿದ ಗೀತೆಗಳಲ್ಲಿ ಒಂದಾಗಿತ್ತು. ಚಮಕ್ ಚಿತ್ರದ ಜೂಡಾ ಸ್ಯಾಂಡಿ ಸಂಯೋಜಿಸಿದ "ಖುಶ್ ಖುಶ್" ಹಾಡಿಗೆ ಸಂಜಿತ್, ಮಿರ್ಚಿಯವರು ನೀಡುವ "ಭವಿಷ್ಯದ ಅತ್ಯುತ್ತಮ ಪುರುಷ ಗಾಯಕ" ಸಂಗೀತ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇವರು 'ಝೀ ಕನ್ನಡ' ವಾಹಿನಿಯ ಪ್ರಖ್ಯಾತ ಸಂಗೀತ ಕಾರ್ಯಕ್ರಮವಾದ "ಸರಿಗಮಪ"ದಲ್ಲಿ ಸ್ಪರ್ಧಿಯಾಗಿದ್ದರು. = ಉಲ್ಲೇಖಗಳು =